ಚಿತ್ರ: ಚಂದ್ರಚಕೋರಿ
ಸಾಹಿತ್ಯ: ಎಸ್.ನಾರಾಯಣ್
ಸಂಗೀತ: ಎಸ್.ಎ.ರಾಜ್‍ಕುಮಾರ್

ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ
ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತೀಯ
ಪ್ರೀತಿ ಬಂತು, ಅದಕ್ಕೀಗ
ಅದರಿಂದ ಹೊಸರಾಗ ಕೇಳಿದೆ ಏನಂತೀಯ
ಸುಖವಾಗಿದೆ ಹೂಂ ಅಂತೀಯ

ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತೀಯ

ಸಾವಿರ ಜನುಮ ಇದ್ದರೂ ನನಗೆ
ನಿನ್ನವಳಾಗೆ ಉಳಿದಿರುವೆ
ಪ್ರೇಮದ ಕನಸಾ ಕಾಣುವ ಕಣ್ಣಿಗೆ ರೆಪ್ಪೆಗಳಾಗಿ ನಾನಿರುವೆ
ನಿನ್ನಂತರಂಗ ನಾನಲ್ಲವೇ
ನಿನ್ನಾಸೆಯಲ್ಲಾ ನನದಲ್ಲವೇ?
ಆ ಸಾಗರದಿ ನಾ ಮುಳುಗಿದರೂ
ಆ ಪ್ರಳಯದಲಿ ನಾ ಸಿಲುಕಿದರೂ
ನಿನ್ನ ಕೂಡುವೆ ಏನಂತೀಯಾ
ಜೊತೆ ಬಾಳುವೆ ಹೂಂ ಅಂತೀಯಾ

ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತೀಯಾ

ಗಂಗೆಯೆ ಕೇಳು, ಗಾಳಿಯೆ ಕೇಳು
ಇವನಿಗೆ ನನ್ನ ಮನಸಿಡುವೆ
ಹೃದಯವ ತೆರೆದು ಮನಸನು ಪಡೆದು
ಜನುಮದ ಪ್ರೀತಿಯ ನಾನೆರೆವೆ
ಪ್ರೀತಿಯ ಊರಾ ನಾಯಕನೇ
ಮುತ್ತಿನ ತೇರಾ ಮನ್ಮಥನೇ
ನನ್ನ ಉಸಿರಿನಲಿ ನಿನ್ನ ಬಿಗಿದಿಡುವೆ
ಉಸಿರಿರೋವರೆಗೂ ನಾ ಪೂಜಿಸುವೆ

ಈ ಆಸೆಗೆ ಏನಂತೀಯ
ನನ್ನ ಭಾಷೆಗೆ ಹೂಂ ಅಂತೀಯಾ

ಕುಹು ಕುಹೂ ಕೋಗಿಲೆ 
ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತೀಯಾ
ಪ್ರೀತಿ ಬಂತು, ಅದಕ್ಕೀಗ
ಅದರಿಂದ ಹೊಸರಾಗ ಕೇಳಿದೆ ಏನಂತೀಯ
ಸುಖವಾಗಿದೆ ಹೂಂ ಏನಂತೀಯ
ಕೂಗಿದೆ ಯಾಕಂತಿಯಾ
ನಿನ್ನ ಕೇಳಿದೆ ಏನಂತೀಯ

ವರ್ಗ:ಕನ್ನಡ ಚಿತ್ರಸಾಹಿತ್ಯ
ವರ್ಗ: ಚಂದ್ರಚಕೋರಿ ಚಿತ್ರ
ವರ್ಗ: ಎಸ್.ನಾರಾಯಣ್ ಸಾಹಿತ್ಯ